ಅಭಿಪ್ರಾಯ / ಸಲಹೆಗಳು

ಪರಿಚಯ

​ಪರಿಚಯ

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್ ಡಿಎ) ಒಂದು ಪ್ರಾಧಿಕಾರವಾಗಿದ್ದು, ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1985 (ಕರ್ನಾಟಕಕಾಯ್ದೆ ಸಂಖ್ಯೆ 39-1985) ರಅಡಿಯಲ್ಲಿ ರಚಿಸಲಾಗಿದೆ. ಇದರ ಪ್ರಮುಖ ಉದ್ದೇಶ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ವ್ಯವಸ್ಥಿತವಾದ ಬೆಳವಣಿಗೆಗಾಗಿ ಯೋಜನೆಗಳನ್ನು ರೂಪಿಸುವುದು, ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಬಿಎಂಆರ್‍ ಪ್ರದೇಶದಲ್ಲಿ ಕ್ರಮಬದ್ದವಾದ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು ಮತ್ತು ಇತರೆ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸುವುದು ಆಗಿರುತ್ತದೆ.

 

ಬಿಎಂಆರ್ ಡಿಎ ಅಧಿನಿಯಮದ ಪ್ರಕಾರ ಪ್ರಾಧಿಕಾರಕ್ಕೆ ಭೂಮಿಯನ್ನು ಹೊಂದಲು ಜಮೀನನ್ನು ತನ್ನಲ್ಲಿ ಉಳಿಸಿಕೊಳ್ಳಲು ಹಾಗೂ ಅದನ್ನು ವಿಲೇವಾರಿ ಮಾಡಲು ಹಾಗೂ ಇತರೆ ಸಂಸ್ಥೆಗಳು ಕೂಡ ಕರಾರುಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ (ಕಲಂ.3). 

ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್ ಡಿಎ) ಒಂದು ಪ್ರಾಧಿಕಾರವಾಗಿದ್ದು, ಇದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1985 (ಕರ್ನಾಟಕ ಕಾಯ್ದೆ ಸಂಖ್ಯೆ 39-1985) ರಅಡಿಯಲ್ಲಿ ರಚಿಸಲಾಗಿದೆ. ಇದರ ಪ್ರಮುಖ ಉದ್ದೇಶ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ವ್ಯವಸ್ಥಿತವಾದ ಬೆಳವಣಿಗೆಗಾಗಿ ಯೋಜನೆಗಳನ್ನು ರೂಪಿಸುವುದು, ಇತರೆ ಇಲಾಖೆಗಳು ಕೂಡ ಸಮನ್ವಯ ಸಾಧಿಸುವುದು ಹಾಗೂ ಬಿಎಂಆರ್‍ಡಿಎ ಪ್ರದೇಶದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವುದು ಮತ್ತು ಇತರೆ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸುವುದುಆಗಿರುತ್ತದೆ.

 

ಬಿಎಂಆರ್ ಡಿಎ ಅಧಿನಿಯಮದ ಪ್ರಕಾರ ಪ್ರಾಧಿಕಾರಕ್ಕೆ ಭೂಮಿಯನ್ನು ಹೊಂದಲು ಜಮೀನನ್ನು ತನ್ನಲ್ಲಿ ಉಳಿಸಿಕೊಳ್ಳಲು ಹಾಗೂ ಅದನ್ನು ವಿಲೇವಾರಿ ಮಾಡಲು ಹಾಗೂ ಇತರೆ ಸಂಸ್ಥೆಗಳು ಕೂಡ ಕರಾರುಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ (ಕಲಂ.3).  ಬಿಎಂಆರ್ ಡಿಎ ಅಧಿನಿಯಮದ ಕಲಂ 9 ರ ಪ್ರಕಾರ ನಿರ್ವಹಿಸಬೇಕಾದ ಮುಖ್ಯವಾದ ಕಾರ್ಯಗಳು ಈ ಕೆಳಕಂಡಂತಿವೆ.

i.              ಬೆಂಗಳೂರು ಮಹಾನಗರ ಪ್ರದೇಶದ ಭೂಮಿಯನ್ನು ಸರ್ವೆ ಮಾಡಿಸುವುದು ಹಾಗೂ ಸರ್ವೆ ವರದಿಯನ್ನು ತಯಾರಿಸುವುದು.

ii.             ಬೆಂಗಳೂರು ಮಹಾನಗರ ಪ್ರದೇಶದ ರಚನಾ ನಕ್ಷೆ (Sಣಡಿuಛಿಣuಡಿe Pಟಚಿಟಿ) ನ್ನು ತಯಾರಿಸುವುದು.

iii.            ರಚನಾ ನಕ್ಷೆಯಲ್ಲಿ ಕಾಣಿಸಲಾದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

iv.           ರಚನಾ ನಕ್ಷೆಯ ಪ್ರಕಾರ ಸೂಕ್ತವಾದ ಯೋಜನೆಗಳನ್ನು ರೂಪಿಸುವುದು.

v.            ಬೆಂಗಳೂರು ಮಹಾನಗರ ಪ್ರದೇಶದ ಅಭಿವೃದ್ಧಿಗಾಗಿ ನಗರ ಯೋಜನೆಗಳನ್ನು ಕಾರ್ಯಗತ ಮಾಡಲು ಸಮನ್ವಯ ಮಾಡುವುದು.

vi.           ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಸಲುವಾಗಿ ಮತ್ತು ಯೋಜನೆಗಳಿಗಾಗಿ ಆರ್ಥಿಕ ವ್ಯವಸ್ಥೆಯನ್ನು ಮಾಡುವುದು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಯೋಜನೆಗಳನ್ನು ಕಾರ್ಯಗತ ಮಾಡಲು ನೆರವು ನೀಡುವುದು.

vii.          ಸರ್ಕಾರವು ನಿಗಧಿಪಡಿಸುವ ಇತರೆ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಕಾರ್ಯಗತಗೊಳಿಸುವುದು.

viii.         ಸ್ಥಳೀಯ ಸಂಸ್ಥೆಗಳಿಗೆ ಅಭಿವೃದ್ಧಿ ಅಥವಾ ಪ್ಲಾನಿಂಗ್ ಯೋಜನೆಗಳನ್ನು ಕಾರ್ಯಗತಗೊಳಿಸಲು ವಹಿಸುವುದು.

ix.           ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‍ಎಸ್‍ಬಿ), ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ (ಕೆಎಸ್‍ಸಿಬಿ), ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ), ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ಹಾಗೂ ಮತ್ತಿತರೆ ಸಂಸ್ಥೆಗಳು ನಿರ್ವಹಿಸುವ ಅಭಿವೃದ್ಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು.

 

 

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.  ಸರ್ಕಾರದ ಕಾರ್ಯದರ್ಶಿಗಳು, ಹಲವು ಇಲಾಖೆಯ ಹಾಗೂ ಸಂಸ್ಥೆಯ ಮುಖ್ಯಸ್ಥರು ಪ್ರಾಧಿಕಾರದ ಸದಸ್ಯರುಗಳಾಗಿರುತ್ತಾರೆ.  ಸರ್ಕಾರವು ಕಾರ್ಮಿಕ ವರ್ಗ, ಮಹಿಳೆ, ಅನುಸೂಚಿತ ಜಾತಿ ಹಾಗೂ ವರ್ಗಗಳಿಂದ ಮತ್ತು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳನ್ನು ನೇಮಿಸಲು ಅಧಿನಿಯಮದಲ್ಲಿ ಅವಕಾಶವಿದೆ, ಸದಸ್ಯರುಗಳು ರಾಜೀನಾಮೆ ನೀಡಿದ ಪ್ರಯುಕ್ತ ಹಾಗೂ ಸರ್ಕಾರವು ನೇಮಕ ಮಾಡಿದ ಪ್ರತಿನಿಧಿಗಳನ್ನು ತೆಗೆದುಹಾಕಿದೆ, ಪ್ರಯುಕ್ತಜುಲೈ 2005 ರಿಂದ ಈ ಸದಸ್ಯರುಗಳ ಸ್ಥಾನವು ಖಾಲಿಯಿದೆ.  ಮಹಾನಗರ ಆಯುಕ್ತರ ಪ್ರಾಧಿಕಾರದ ಪದ ನಿಮಿತ್ತ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಪ್ರಾಧಿಕಾರದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ನಗರಾಭಿವೃದ್ಧಿ ಸಚಿವರಾಗಿದ್ದು, ಮಹಾನಗರ ಆಯುಕ್ತರು ಉಪಾಧ್ಯಕ್ಷರಾಗಿರುತ್ತಾರೆ.  ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಸರ್ಕಾರದ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರುಗಳು ಸದಸ್ಯರಾಗಿರುತ್ತಾರೆ.

 

                ಬೆಂಗಳೂರು ಮಹಾನಗರ ಪ್ರದೇಶವು (ಬಿಎಂಆರ್) ದೇಶದಲ್ಲಿರುವ ಮಹಾನಗರ ಪ್ರದೇಶಗಳಲ್ಲಿ ಒಂದುದೊಡ್ಡದಾದ ಮಹಾನಗರ ಪ್ರದೇಶವಾಗಿದ್ದು, ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತುರಾಮನಗರ ಜಿಲ್ಲೆಗಳನ್ನು ಒಳಗೊಂಡಿದ್ದು, ಇದು 8005 ಚದರ ಕಿಲೋ ಮೀಟರ್‍ ಇದ್ದು, ಇದರಜನಸಂಖ್ಯೆ 11.7 ಮಿಲಿಯನ್ (2011ರ ಜನಗಣತಿ ಪ್ರಕಾರ) ಇರುತ್ತದೆ.

 
 
 

ಇತ್ತೀಚಿನ ನವೀಕರಣ​ : 25-02-2021 11:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080